ಮಾವು ಅಭಿವೃದ್ಧಿ ನಿಗಮದ ವತಿಯಿಂದ ಮಾವು ಬೆಳೆಗಾರರಿಗೆ ನೀಡಲಾಗುತ್ತಿರುವ ಸವಲತ್ತುಗಳು

1. ಕೊಯ್ಲು ಪೂರ್ವ ಪರಿಕರಗಳು:

ಸಮಗ್ರ ಪೋಷಕಾಂಶ ನಿರ್ವಹಣೆ / ಸಮಗ್ರ ಕೀಟ ನಿಯಂತ್ರಣ ಪರಿಕರಗಳು (INM/IPM):

  • ಮ್ಯಾಂಗೋ ಸ್ಪೆಷಲ್ (Mango Special) – ಪ್ರತಿ ಕೆ.ಜಿ.ಗೆ ರೂ.118/- ರಂತೆ ಶೇ.50 ರಷ್ಟು ಅಂದರೆ ರೂ.59/- ರಂತೆ ಪ್ರತಿ ಫಲಾನುಭವಿಗೆ (ಪ.ಜಾ/ಪ.ಪಂ ವರ್ಗಕ್ಕೆ-60% ಮತ್ತು ಇತರೆ-50%) ಗರಿಷ್ಠ 10 ಎಕರೆವರೆಗೆ 80 ಕೆ.ಜಿ.ವರೆಗೆ ಸಹಾಯಧನ ನೀಡಲಾಗುವುದು.
  • ಸೀಲರ್ ಕಮ್ ಹೀಲರ್ (Healer cum Sealer) – ಪ್ರತಿ ಕೆ.ಜಿ. ರೂ.110/- ರಂತೆ ಶೇ.50 ರಷ್ಟು ಅಂದರೆ ರೂ.55/- ರಂತೆ ಪ್ರತಿ ಫಲಾನುಭವಿಗೆ (ಪ.ಜಾ/ಪ.ಪಂ ವರ್ಗಕ್ಕೆ-60% ಮತ್ತು ಇತರೆ-50%) ಗರಿಷ್ಠ 10 ಎಕರೆವರೆಗೆ 100 ಕೆ.ಜಿ.ಗೆ ಸಹಾಯಧನ ನೀಡಲಾಗುವುದು.
  • ಫೆರಮೋನ್ ಟ್ರಾಪ್ (Pheromone traps) – ಪ್ರತಿ ಬಾಕ್ಸ್ ಮತ್ತು 3 ಲ್ಯೂರ್ ಗೆ ರೂ.44/- ರಂತೆ ಶೇ.50 ರಷ್ಟು ಅಂದರೆ ರೂ.22/- ರಂತೆ ಪ್ರತಿ ಫಲಾನುಭವಿಗೆ (ಪ.ಜಾ/ಪ.ಪಂ ವರ್ಗಕ್ಕೆ-60% ಮತ್ತು ಇತರೆ-50%) ಗರಿಷ್ಠ 10 ಎಕರೆವರೆಗೆ 80 ಬಾಕ್ಸ್ ಮತ್ತು 240 ಲ್ಯೂರ್‍ಗೆ ಸಹಾಯಧನ ನೀಡಲಾಗುವುದು.
  • ಸಸ್ಯ ಸಂರಕ್ಷಣೆ ಔಷಧಿಗಳಿಗೆ ಸಹಾಯಧನ: ಮಾವು ಬೆಳೆಗಾರರು ಮಾವು ಬೆಳೆಯಲ್ಲಿ ಕಂಡು ಬರುವ ರೋಗ ಮತ್ತು ಕೀಟ ನಿಯಂತ್ರಣಕ್ಕೆ ಖರೀದಿಸುವ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಶೇ. 50 ರಷ್ಟು ಅಂದರೆ ಪ್ರತಿ ಫಲಾನುಭವಿಗೆ (ಪ.ಜಾ/ಪ.ಪಂ ವರ್ಗಕ್ಕೆ-60% ಮತ್ತು ಇತರೆ-50%) ಕನಿಷ್ಟ 0.4 ಹೆಕ್ಟೇರ್ ರಿಂದ ಗರಿಷ್ಠ 10 ಹೆಕ್ಟೇರ್‍ವರಗೆ ರೂ.2000/-ರಿಂದ ಗರಿಷ್ಠ ರೂ.20,000/- ದವರಗೆ ಸಹಾಯಧನ ನೀಡಲಾಗುವುದು.

2. ಕೊಯ್ಲೋತ್ತರ ನಿರ್ವಹಣೆ ಪರಿಕರಗಳು:

  • ಪ್ಲಾಸ್ಟಿಕ್ ಕ್ರೇಟ್ಸ್ (Plastic Crates) – 15 ಕೆ.ಜಿ. ಮತ್ತು 20 ಕೆ.ಜಿ. ಸಾಮಥ್ರ್ಯದ ವಿವಿಧ ವಿಶಿಷ್ಠತೆಯ ಪ್ಲಾಸ್ಟಿಕ್ ಕ್ರೇಟ್ಸ್‍ನ ದರವು ರೂ.250 ರಿಂದ 300 ಇದ್ದು, ಪ್ರತಿ ಫಲಾನುಭವಿಗೆ (ಪ.ಜಾ/ಪ.ಪಂ ವರ್ಗಕ್ಕೆ-60% ಮತ್ತು ಇತರೆ-50%) ಗರಿಷ್ಠ 200 ಸಂಖ್ಯೆ ಕ್ರೇಟ್ಸ್ ಅನ್ನು ಶೇ.50 ರ ಸಹಾಯಧನಕ್ಕೆ ಪರಿಗಣಿಸಲಾಗುವುದು.
  • ಕಾರ್ಟನ್ ಬಾಕ್ಸ್ (Carton Boxes) – 3 ಕೆ.ಜಿ. ಸಾಮಥ್ರ್ಯದ ಕಾರ್ಟನ್ ಬಾಕ್ಸ್‍ನ ದರವು ರೂ.17.50 ಇದ್ದು, ಪ್ರತಿ ಫಲಾನುಭವಿಗೆ(ಪ.ಜಾ/ಪ.ಪಂ ವರ್ಗಕ್ಕೆ-60% ಮತ್ತು ಇತರೆ-50%) ಗರಿಷ್ಠ 2000 ಸಂಖ್ಯೆ ವರೆಗೆ ಶೇ.50 ರಷ್ಟು ಸಹಾಯಧನವನ್ನು ನೀಡಲಾಗುವುದು.
  • ಕಡಿಮೆ ವೆಚ್ಚದ ಹಣ್ಣು ಮಾಗಿಸುವ ಘಟಕ – IIHR ವತಿಯಿಂದ ಅಭಿವೃದ್ಧಿ ಪಡಿಸಿರುವ ಒಂದು ಟನ್ ಸಾಮಥ್ರ್ಯವುಳ್ಳ Cubic Meter-1.6mx1.4mx1.8m height ಅಳತೆಯ ಕಡಿಮೆ ವೆಚ್ಚದ ಹಣ್ಣು ಮಾಗಿಸುವ ಘಟಕಕ್ಕೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು.
  • ಮಾವಿನಹಣ್ಣು ಕಟಾವು ಮಾಡುವ ಸಲಕರಣೆ (Mango Harvester) – ಕಡಿಮೆ ವೆಚ್ಚದ ಮಾವು ಹಣ್ಣು ಕಟಾವು ಮಾಡುವ ಸಲಕರಣೆಗೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು.
  • Ethylene Cans ಗೆ ಸಹಾಯಧನ: ಮಾವು ಹಣ್ಣುಗಳನ್ನು ಮಾಗಿಸಲು ಅನುವಾಗುವಂತೆ ಮಾವು ಬೆಳೆಗಾರರು ಖರೀದಿಸುವ Ethylene Cans ಗೆ ಶೇ. 50 ರಷ್ಟು ಅಂದರೆ ಪ್ರತಿ ಫಲಾನುಭವಿಗೆ 50 ಟನ್ ಹಣ್ಣುಗಳನ್ನು ಮಾಗಿಸಲು ಖರೀದಿಸುವ 25 ಕ್ಯಾನ್‍ಗಳಿಗೆ ಗರಿಷ್ಠ ರೂ.2000/-ವರಗೆ ಸಹಾಯಧನ ನೀಡಲಾಗುವುದು.

ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮ

ಮಾವು ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ (ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ) ಇಲಾಖೆಯ ಮಾರ್ಗಸೂಚಿಯನ್ವಯ ರೈತರಿಗೆ ಮತ್ತು ತಾಂತ್ರಿಕ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.