ಸ್ಥಾಪನೆ

ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಹಾಗೂ ಮಾರುಕಟ್ಟೆ ನಿಗಮ ನಿಯಮಿತ, ದಿನಾಂಕ: 19.01.2011ರಲ್ಲಿ ಸ್ಥಾಪನೆಯಾಗಿದ್ದು, ಕಂಪನಿಗಳ ಕಾಯ್ದೆ, 1956ರಡಿ ನೋಂದಣಿಯಾಗಿದೆ.

ಉದ್ದೇಶಗಳು

ಮಾವು ಬೆಳೆ ಸಾಗುವಳಿ, ಬೆಳೆ ನಂತರದ ನಿರ್ವಹಣೆ, ರಾಜ್ಯ ಹಾಗೂ ಇತರೆ ಸ್ಥಳಗಳ ಮಾವು ಬೆಳೆಗಾರರ ಲಾಭಕ್ಕಾಗಿ ಮಾವಿನಹಣ್ಣುಗಳ ರಫ್ತು ವ್ಯವಹಾರಗಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದು.

ನಿಗಮದ ಆಶ್ರಯದಲ್ಲಿ ಎರಡು ಮಾವು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

  • ಮಾವು ಅಭಿವೃದ್ಧಿ ಕೇಂದ್ರ, ಹೊಗಲಗೆರೆ ತೋಟಗಾರಿಕಾ ಕೇಂದ್ರ, ಶ್ರೀನಿವಾಸಪುರ, ಕೋಲಾರ ಜಿಲ್ಲೆ.
    ಕೊಯ್ಲು ಪೂರ್ವ ತರಬೇತಿ, ಪ್ರಾತ್ಯಕ್ಷಿಕೆ ಹಾಗೂ ತಾಂತ್ರಿಕ ಕಲಿಕೆಗಳ ಮೂಲಕ ಮಾವು ಬೆಳೆಗಾರರನ್ನು ಶಿಕ್ಷಿತರನ್ನಾಗಿಸುವುದು ಈ ಕೇಂದ್ರದ ಉದ್ದೇಶ.
  • ಮಾವು ಅಭಿವೃದ್ದಿ ಕೇಂದ್ರ, ಮೂಡಿಕೆರೆ ತೋಟಗಾರಿಕಾ ಕೇಂದ್ರ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ.
    ಕಟಾವಿನ ನಂತರದ ನಿರ್ವಹಣೆಯ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ಒದಗಿಸುವುದು ಈ ಕೇಂದ್ರದ ಉದ್ದೇಶ.